LATEST NEWS
ಗುಡ್ಡ ಕುಸಿತ, ಬೆಂಗಳೂರು ಮಂಗಳೂರು ರೈಲು ಸಂಚಾರ ವ್ಯತ್ಯಯ
ಪುತ್ತೂರು, ಆಗಸ್ಟ್ 29 : ಬೆಂಗಳೂರು ಮಂಗಳೂರು ರೈಲು ಮಾರ್ಗದಲ್ಲಿ ಸುಬ್ರಹ್ಮಣ್ಯ- ಎಡಕುಮೇರಿ ರೈಲು ಮಾರ್ಗದ ಮಧ್ಯೆ ಇಂದು ಮದ್ಯಾಹ್ನ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರಕ್ಕೆ ತೊಡಕಾಗಿದೆ. ಮಂಗಳೂರು – ಬೆಂಗಳೂರಿನ ಮಧ್ಯೆ ಇರುವ ಎಡಕುಮೇರಿಯಲ್ಲಿ ಇಂದು ಸುರಿದ ಧಾರಾಕಾರ ಮಳೆಗೆ ಈ ಗುಡ್ಡ ಕುಸಿದು ರೈಲು ಹಳಿಗಳ ಮೇಲೆ ಬಿದ್ದಿದೆ. ಇದರಿಂದ ಈ ಬೆಂಗಳೂರಿನಿಂದ ಮಂಗಳೂರಿಗೆ ಈಗಾಗಲೇ ಹೊರಟ ರೈಲು ಪ್ರಯಾಣಕ್ಕೆ ತೊಂದರೆಯಾಗಿದೆ. ರೈಲು ಸಿರಿಬಾಗಿಲು ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಿದೆ. ರೈಲ್ವೇ ಹಳಿಗಳ ಮೇಲೆ ಬಿದ್ದ ಗುಡ್ಡ ಕುಸಿತದ ಮಣ್ಣನ್ನು ತೆರವು ಮಾಡುವ ಕಾರ್ಯ ಭರದಿಂದ ಸಾಗುತ್ತಿದ್ದು, ಇಂದು ರಾತ್ರಿ 9 ಗಂಟೆ ಹೊತ್ತಿಗೆ ಮತ್ತೆ ಈ ರೈಲು ಮಂಗಳೂರಿನತ್ತ ಪ್ರಯಾಣ ಬೆಳೆಸಲಿದೆ. ಈಗಾಗಲೇ ಕಾರವಾರ ಯಶವಂತ ಪುರ ರೈಲು ಹೊರಟಿದ್ದು ಈ ರೈಲಿನ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ಈ ರೈಲು ಕಣ್ಣೂರು -ಪಾಲಾಕ್ಕಾಡ್- ಕೊಯಮತ್ತೂರು-ಸೇಲಂ- ಕುಪ್ಪಂ-ಬಂಗಾರ ಪೇಟೆ ಮೂಲಕ ಬೆಂಗಳೂರಿಗೆ ತಲುಪಲಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
You must be logged in to post a comment Login