Connect with us

    LATEST NEWS

    ಗುಜರಾತ್‌ನಿಂದ ಅಪಹೃತ ಮಗುವಿನ ಪತ್ತೆಗೆ ಸಹಕರಿಸಲು ಮನವಿ

    ಗುಜರಾತ್‌ನಿಂದ ಅಪಹೃತ ಮಗುವಿನ ಪತ್ತೆಗೆ ಸಹಕರಿಸಲು ಮನವಿ

    ಮಂಗಳೂರು ನವೆಂಬರ್ 08: ಗುಜರಾತ್‌ನಿಂದ ರೇಖಾ ಯಾನೆ ಶಹನಾಝ್ ಎಂಬ ಮಹಿಳೆಯು ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ಐದು ವರ್ಷದ ಕಿಂಜಾಲ್ ಎಂಬ ಹೆಸರಿನ ಹೆಣ್ಣು ಮಗುವನ್ನು ಅಪಹರಿಸಿದ್ದಾಳೆ. ಈ ನಡುವೆ ಆರೋಪಿಯ ಜಾಡು ಹಿಡಿದ ಪೊಲೀಸರಿಗೆ ಆರೋಪಿ ರೇಖಾ ಅವರ ಮಂಗಳೂರು ಸಮೀಪದ ಕಾವೂರಿನ ಪಿವಿಸಿ ಕಾಂಪ್ಲೆಕ್ಸ್ ಬಳಿ ಇರುವುದು ಆಕೆಯ ಮೊಬೈಲ್ ಟವರ್ ಲೊಕೇಶನ್ ಮೂಲಕ ನವೆಂಬರ್ 6 ರಂದು ಗೊತ್ತಾಗಿದೆ.

    ಗುಜರಾತ್ ಪೊಲೀಸರು ನೀಡಿದ ಮಾಹಿತಿಯಂತೆ ಕಾವೂರು ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ನಂತರ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಆಕೆ ಸುತ್ತಾಡಿರುವ ಮಾಹಿತಿ ಇದೆ.

    ಈ ಮಹಿಳೆ ಮತ್ತು ಮಗುವನ್ನು ಕಂಡವರು ಕಾವೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 2220533 ಅಥವಾ ಗುಜರಾತ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಚೇತನ್ ಜಡೇಜಾ ಅವರ ಮೊಬೈಲ್ ಸಂಖ್ಯೆ 9879324147 ಸಂಪರ್ಕಿಸಿ ಮಾಹಿತಿ ನೀಡಲು ಕೋರಲಾಗಿದೆ. ಮಗುವಿನ ಪತ್ತೆಗೆ ಸಹಕರಿಸಿದವರಿಗೆ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಜಡೇಜಾ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply