Connect with us

LATEST NEWS

ಗಾಂಜಾ ಹಿಂದೆ ಬಿದ್ದ ಮಂಗಳೂರು ಪೊಲೀಸರು ಇಬ್ಬರ ಬಂಧನ

ಗಾಂಜಾ ಹಿಂದೆ ಬಿದ್ದ ಮಂಗಳೂರು ಪೊಲೀಸರು ಇಬ್ಬರ ಬಂಧನ

ಮಂಗಳೂರು ನವೆಂಬರ್ 8: ವಾಮಂಜೂರಿನ ಕರಾವಳಿ ಕಾಲೇಜು ಆಫ್ ಫಾರ್ಮಸಿ ಬಸ್ಸು ತಂಗುದಾಣದ ಸಮೀಪದಲ್ಲಿ ಹೊಂಡಾ ಆಕ್ಟಿವಾ ಮತ್ತು ಸುಝುಕಿ ಆಕ್ಸೆಸ್ ಸ್ಕೂಟರಿನಲ್ಲಿ ಬಂದು ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ದೀಪಕ್, ಪ್ರಜ್ವಲ್ ಎಂದು ಗುರುತಿಸಲಾಗಿದೆ. ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಸದ್ರಿ ಆರೋಪಿಗಳ ವಶದಲ್ಲಿದ್ದ ಸುಮಾರು 35 ಗ್ರಾಂ ಗಾಂಜಾ ಹಾಗೂ ಆರೋಪಿಗಳು ಗಾಂಜಾ ಮಾರಾಟ ಬಂದಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಮತ್ತು ಆಕ್ಸಿಸ್ 125 ಸ್ಕೂಟರನ್ನು ಸ್ವಾಧೀನಪಡಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.