Connect with us

LATEST NEWS

ಗಾಂಜಾ ಸೇವನೆ ಐವರ ಬಂಧನ

ಗಾಂಜಾ ಸೇವನೆ ಐವರ ಬಂಧನ

ಮಂಗಳೂರು ನವೆಂಬರ್ 5: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ 5 ಮಂದಿ ಯುವಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಜೆ ಬಿ ಲೋಬೊ ರಸ್ತೆ ಬಳಿ ಯುವಕರು ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು .

ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಮಂಗಳೂರು ಕೇಂದ್ರ ಉಪ ಭಾಗದ ರೌಡಿ ನಿಗ್ರಹ ದಳ ಪೊಲೀಸರು ಶಮೀಲ್ (24), ಶಬೀತ್(23), ಅಮೀಮ್(23), ಶಬೀರ್(26), ಅನ್ಸಾರ್(26) ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ ಪ್ಯಾಕೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.