Connect with us

MANGALORE

ಕ್ರೈಸ್ತರ ಮೇಲೆ ಟಿಪ್ಪು ನಡೆಸಿದ ಹತ್ಯಾಕಾಂಡ ಕುರಿತ ಚಲನಚಿತ್ರ ನಿರ್ಮಾಣ

ಕ್ರೈಸ್ತರ ಮೇಲೆ ಟಿಪ್ಪು ನಡೆಸಿದ ಹತ್ಯಾಕಾಂಡ ಕುರಿತ ಚಲನಚಿತ್ರ ನಿರ್ಮಾಣ

ಮಂಗಳೂರು ನವೆಂಬರ್ 9: ಕರಾವಳಿಯಲ್ಲಿ ಕ್ರೈಸ್ತರ ಮೇಲೆ ಟಿಪ್ಪು ಸುಲ್ತಾನ ಕ್ರೌರ್ಯ ವಿಚಾರವಾಗಿ ರಾಜ್ಯ ಸರಕಾರದ ವಿರುದ್ದ ಕರಾವಳಿಯ ಕ್ರೈಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆನರಾ ಕ್ರಿಶ್ಚಿಯನ್ ವಿಕ್ಟಿಮ್ಸ್ ಆಫ್ ಟಿಪ್ಪು ಸುಲ್ತಾನ್ ಸಮಿತಿಯ ಸಂಚಾಲಕ ರೊಬರ್ಟ್ ರೊಜಾರಿಯೊ ಕರಾವಳಿ ಜಿಲ್ಲೆಗಳಲ್ಲಿ ಕ್ರೈಸ್ತರ ವಿರುದ್ದ ಟಿಪ್ಪು ಸುಲ್ತಾನ್ ನಡೆಸಿದ ಕ್ರೌರ್ಯಗಳ ಬಗ್ಗೆ ದಾಖಲೆಗಳಿವೆ ಎಂದು ಹೇಳಿದರು.

ಕ್ರೈಸ್ತ ಸಮುದಾಯದ ವಿರುದ್ದ ಟಿಪ್ಪು ನಡೆಸಿದ ಹತ್ಯಾಕಾಂಡದ ಬಗ್ಗೆ ಸಮುದಾಯದ ಸದಸ್ಯರಿಂದ ಚಂದಾ ಎತ್ತಿ ಚಲನಚಿತ್ರ ನಿರ್ಮಿಸುತ್ತೇವೆ ಎಂದು ಹೇಳಿದರು. ಕ್ರೈಸ್ತ ಸಮುದಾಯದ ಜನಪ್ರತಿನಿಧಿಗಳು ಟಿಪ್ಪುವಿನ ಕ್ರೌರ್ಯದ ಬಗ್ಗೆ ಮಾತನಾಡಬೇಕು. ಐವನ್ ಡಿಸೋಜಾ, ಜೆ.ಆರ್ ಲೋಬೋ, ಅಸ್ಕರ್ ಫರ್ನಾಂಡೀಸ್ ಕ್ರೈಸ್ತರಿಗೆ ಆದ ಅನ್ಯಾಯವನ್ನು ಸರಕಾರಕ್ಕೆ ತಿಳಿಸಬೇಕು ಎಂದು ಹೇಳಿದ ಅವರು,
ಇಲ್ಲದಿದ್ರೆ ಮುಂದಿನ ಚುನಾವಣೆಯಲ್ಲಿ ಕ್ರೈಸ್ತ ಧರ್ಮದ ಹೆಸರಲ್ಲಿ ಮತ ಪಡೆಯಬಾರದು, ಟಿಪ್ಪು ಸುಲ್ತಾನನ ಹೆಸರಲ್ಲಿ ಮತ ಕೇಳಿ ಎಂದರು.

Facebook Comments

comments