ಕುರ್ನಾಡು ಗ್ರಾಮಸ್ಥರಿಂದ ಪುಲ್ವಾಮಾ ಹುತಾತ್ಮರಿಗೆ ಭಾವಪೂರ್ಣ ಶ್ರಧ್ಧಾಂಜಲಿ

ಮಂಗಳೂರು, ಫೆಬ್ರವರಿ 19 : ಮಂಗಳೂರಿನ ಹೊರ ವಲಯದ ಕೊಣಾಜೆಯ ಕುರ್ನಾಡು ಗ್ರಾಮಸ್ಥರು ಹಾಗೂ ಮುಡಿಪಿನಲ್ಲಿ ನೆರೆದ ಸುತ್ತಮುತ್ತಲಿನ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ ಕಾಶ್ಮೀರದ ಪುಲ್ವಾಮಾ ದಲ್ಲಿ ಪಾಕಿ ಉಗ್ರರಿಂದ ಜತ್ಯೆಗೀಡಾದ ಸೈನಿಕರಿಗೆ ಶ್ರಧ್ಧಾಂಜಲಿ ಸಮರ್ಪಣಾ ಕಾರ್ಯಕ್ರಮ ನೆರವೇರಿತು .
ಈ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ಶ್ರೀ ರಾಮಕೃಷ್ಣ ಶಾಸ್ತ್ರಿ ಹೂಹಾಕುವಕಲ್ಲು,ಶ್ರೀ ಯಂ ಪ್ರಭಾಕರ್ ಮುಡಿಪು ,ಶ್ರೀ ಮಹಾಲಿಂಗ ಭಟ್ ಕಂಬ್ಳಪದವು ಹಾಗೂ ಶ್ರೀ ತಂಬಾಜೆ ಗೋಪಾಲ್ ಮತ್ತು ಸೈನ್ಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಉರಿಯಲ್ಲಿ ಪಾಕಿಸ್ತಾನದ ಉಗ್ರರ ಜೊತೆಗೆ ಮುಖಾಮುಖಿ ಹೋರಾಟದಲ್ಲಿ ಎದೆಗೆ ಗುಂಡೇಟು ತಗಲಿದರೂ ಶೌರ್ಯದಿಂದ ಕಾದಾಡಿದ ಶ್ರೀ ಸಂತೋಷ್ ಇವರುಗಳಿಗೆ ಗೌರವಾದರಗಳನ್ನು ಸಮರ್ಪಿಸಲಾಯಿತು.
ಟಿ ಜಿ ರಾಜಾರಾಮ ಭಟ್ ಮಾತನಾಡಿ ಕಾಶ್ಮೀರದ ಪುಲ್ವಾಮ ದಲ್ಲಿ ಉಗ್ರರಿಂದ ಹತ್ಯೆಗೀಡಾದ ನಮ್ಮ ಸೈನಿಕರಿಗೆ ನುಡಿನಮನಗಳನ್ನು ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ನರೆದ ದೇಶಾಭಿಮಾನಿಗಳು ದೇಶಕ್ಕಾಗಿ ಪ್ರಾಣಾರ್ಪಣೆಗೈದ ಯೋಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಹಣತೆಗಳ ದೀಪ ಹಚ್ಚಿ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಂಗಳೂರು ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರು,ಕುರ್ನಾಡು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ನಿತಿನ್ ಕುಮಾರ್ ,ಕೈರಂಗಳ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ  ಮಹೇಶ್ ಚೌಟ , ಜಗದೀಶ್ ಆಳ್ವ ಕೂವೆತ್ತಬೈಲು ,ಲೋಹಿತ್ ಗಟ್ಟಿ ಕೈರಂಗಳ , ನವೀನ್ ಶೆಟ್ಟಿ ಕೊಡಕ್ಕಲ್ಲು ವಿಕಾಸ್ ಮುಡಿಪು, ಚಂದ್ರಶೇಖರ್ ಕಲ್ಲಾಪು, ಅಸ್ಗರ್ ಸಂಬಾರ ತೋಟ ಮುಂತಾದವರು ಹಾಜರಿದ್ದರು.

Facebook Comments

comments