Connect with us

    LATEST NEWS

    ಕುದ್ರೋಳಿಯಲ್ಲಿ ಗೂಡುದೀಪಗಳ ಸಾಲು, ಒಂದಕ್ಕಿಂತ ಒಂದು ಮೇಲು

    ಕುದ್ರೋಳಿಯಲ್ಲಿ ಗೂಡುದೀಪಗಳ ಸಾಲು, ಒಂದಕ್ಕಿಂತ ಒಂದು ಮೇಲು

    ಮಂಗಳೂರು ಅಕ್ಟೋಬರ್ 17: ಬೆಳಕಿನ ಹಬ್ಬ ದೀಪಾವಳಿ, ದೀಪಾವಳಿಯಂದು ಪ್ರತಿ ಮನೆಯಲ್ಲಿ ಗೂಡು ದೀಪವನ್ನು ಇಡುವುದು ವಾಡಿಕೆ. ಕತ್ತಲನ್ನು ತೊಡೆದು ಬೆಳಕನ್ನು ಮೂಡಿಸುವ ಈ ಗೂಡುದೀಪವನ್ನು ನೋಡುವುದೆ ಚೆಂದ. ಈ ಹಿಂದೆ ಪ್ರತಿ ಮನೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಈ ಗೂಡು ದೀಪಗಳನ್ನು ರಚಿಸಲಾಗುತ್ತಿತ್ತು.

    ದರೆ ಈಗ ಕಾಲ ಬದಲಾಗಿದೆ. ಜಾಗತೀಕರಣದ ಭರಾಟೆಯಲ್ಲಿ ರೆಡಿಮೇಡ್ ಗೂಡು ದೀಪಗಳು ಮಾರುಕಟ್ಟೆ ಪ್ರವೇಶಿಸಿವೆ. ಗೂಡು ದೀಪಗಳ ಪರಂಪರೆ ನಶಿಸುತ್ತಿರುವ ಈ ಸಂದರ್ಭದಲ್ಲಿ ಜನರನ್ನು ಗೂಡು ದೀಪಗಳತ್ತ ಆಕರ್ಷಿಸುವ ಕೆಲಸ ಮಂಗಳೂರಿನಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ಕಳೆದ 16 ವರ್ಷಗಳಿಂದ ಗೂಡುದೀಪ ಸ್ಪರ್ಧೆಯನ್ನು ಮಂಗಳೂರಿನಲ್ಲಿ ನಮ್ಮ ಕುಡ್ಲ ಸಂಸ್ಥೆಯ ನಡೆಸಿಕೊಂಡು ಬಂದಿದೆ.

    ಈ ಹಿನ್ನಲೆಯಲ್ಲಿ ಸಾಂಪ್ರಾದಾಯಿಕ ಸೊಗಡನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಗೂಡು ದೀಪ ರಚಿಸುವ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಮಂಗಳೂರಿನ ನಮ್ಮಕುಡ್ಲ ಸಂಸ್ಥೆ ಕಳೆದ 16 ವರ್ಷಗಳಿಂದ ಏರ್ಪಡಿಸುತ್ತಿದೆ. ಈ ಬಾರಿಯಂತು 450 ಕ್ಕೂ ಅಧಿಕ ಗೂಡು ದೀಪಗಳು ಈ ಸ್ಫರ್ಧೆಯಲ್ಲಿ ಪಾಲ್ಗೊಂಡಿವೆ.

    ಳೆದ 16 ವರ್ಷಗಳಿಂದ ಗೂಡು ದೀಪಗಳನ್ನು ರಚಿಸುವ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಏರ್ಪಡಿಸಲಾಗುತ್ತಿದ್ದು ಪಾರಂಪರಿಕ , ಆಧುನಿಕ ಸೇರಿದಂತೆ 3 ವಿಭಾಗಗಳಲ್ಲಿ ಈ ಗೂಡು ದೀಪ ರಚಿಸುವ ಸ್ಪರ್ಧೆ ಆಯೋಜಿಸಲಾಗುತ್ತಿದೆ.ಸಾಂಪ್ರದಾಯಿಕ, ಆಧುನಿಕ ಶೈಲಿ, ಮಾದರಿ ಎಂಬ ಮೂರು ವಿಭಾಗಗಳಲ್ಲಿ ಗೂಡು ದೀಪಗಳು ಪ್ರದರ್ಶಿತವಾಗಿದ್ದುವು. ಸಾಂಪ್ರಾದಾಯಿಕ ವಿಭಾಗದಲ್ಲಿ ಧಾನ್ಯ ಕಾಳುಗಳು, ತರಕಾರಿ, ತೆಂಗಿನ ಗರಿ, ಪಿವಿಸಿ ಪೈಪ್,ರುದ್ರಾಕ್ಷಿ, ಹರಳು, ಬಳೆ, ಬಿದಿರು, ಕಸೂತಿ ಕಲೆಯ ವೈಶಿಷ್ಟ್ಯಗಳನ್ನೊಳಗೊಂಡ ವಿಶಿಷ್ಟ ಗೂಡು ದೀಪಗಳು ಪ್ರದರ್ಶನಗೊಂಡರೆ, ಆಧುನಿಕ ಶೈಲಿಯ ಗೂಡು ದೀಪಗಳಲ್ಲಿ ಚಿಪ್ಪು, ಇನ್ನಿತರ ವಸ್ತುಗಳನ್ನು ಬಳಸಿ ರೂಪಿಸಿದ ಗೂಡುದೀಪಗಳೊಂದಿಗೆ ಗಡಿಯಾರ, ತೈಲಾಂಡ್ ನ ವಿಶ್ವ ಪ್ರಸಿದ್ದ ದೇವಾಲಯ, ಪಾರಂಪರಿಕ ಕಟ್ಟಡಗಳ ವಿಶಿಷ್ಟವಾದ ಕಲಾಕೃತಿಗಳು ನೋಡುಗರ ಮನ ತಣಿಸುದುವು. ಈ ಸುಂದರ ಗುಡುದೀಪಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಲು ದೂರದ ಊರುಗಳಿಂದ ಸಾವಿರ ಸಂಖ್ಯೆಯಲ್ಲಿ ಜನ ಸಾಗರವೇ ಹರಿದು ಬಂದಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply