Connect with us

    DAKSHINA KANNADA

    ಕಾಶ್ಮೀರದಲ್ಲಿ ಬಾಲಕಿ ಮೇಲಿನ ಅತ್ಯಾಚಾರ, ವಿದೇಶದಲ್ಲಿ ನಡೆಯುತ್ತಿದೆ ಭಾರತದ ವಿರುದ್ಧ ಅಪಪ್ರಚಾರ

    ಕಾಶ್ಮೀರದಲ್ಲಿ ಬಾಲಕಿ ಮೇಲಿನ ಅತ್ಯಾಚಾರ, ವಿದೇಶದಲ್ಲಿ ನಡೆಯುತ್ತಿದೆ ಭಾರತದ ವಿರುದ್ಧ ಅಪಪ್ರಚಾರ

    ಮಂಗಳೂರು, ಎಪ್ರಿಲ್ 16 : ಕಾಶ್ಮೀರದ ಕಥುವಾದಲ್ಲಿ ಜನವರಿ 11 ರಂದು ನಡೆದಿದೆ ಎನ್ನಲಾಗಿರುವ ಆಸಿಫಾ ಎನ್ನುವ 8 ವರ್ಷ ಪ್ರಾಯದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಇದೀಗ ವಿದೇಶಗಳಲ್ಲೂ ಸುದ್ಧಿ ಮಾಡಿದೆ.

    ಇದೇ ವಿಚಾರವನ್ನಿಟ್ಟುಕೊಂಡು ದೇಶದ ಕೆಲವು ರಾಜಕೀಯ ಪಕ್ಷಗಳು, ಕೆಲವು ಎನ್.ಜಿ.ಒ ಗಳು ಕೇಂದ್ರದಲ್ಲಿ ಆಡಳಿತದಲ್ಲಿರುವ ನರೇಂದ್ರ ಮೋದಿ ಸರಕಾರದ ತಿರುಗಿ ಬಿದ್ದಿದೆ.

    ದೇಶದಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಮಹಿಳೆಯರ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ ಎನ್ನುವ ಕೂಗೂ ಈ ವರ್ಗದಿಂದ ಹೆಚ್ಚಾಗುತ್ತಿದೆ.

    ಘಟನೆಯನ್ನು ಖಂಡಿಸಿ ಪ್ರತಿದಿನ ದೇಶದಾದ್ಯಂತ ಪ್ರತಿಭಟನೆಗಳು, ಕ್ಯಾಂಡಲ್ ಮಾರ್ಚ್ ಗಳು ನಡೆಯುತ್ತಿವೆ.

    ದೇಶದಲ್ಲಿ ಈ ವರೆಗೆ ನಡೆದಿರುವ ಎಲ್ಲಾ ಅತ್ಯಾಚಾರ ಪ್ರಕರಣಗಳಿಗಿಂತ ಕೊಂಚ ಹೆಚ್ಚಿನ ಪ್ರಚಾರವೂ ಕಾಶ್ಮೀರದಲ್ಲಿ ನಡೆದ ಅಸಿಫಾ ಎನ್ನುವ ಬಾಲಕಿಯ ಅತ್ಯಾಚಾರಕ್ಕೆ ದೊರೆತಿದೆ.

    ಕೇವಲ ದೇಶದಲ್ಲಿ ಮಾತ್ರವಲ್ಲದೇ ಇದೀಗ ವಿದೇಶದಲ್ಲೂ ಈ ಘಟನೆಗೆ ಸಂಬಂಧಿಸಿದಂತೆ ದೇಶದ ಮಾನ ಕಳೆಯುವ ಪ್ರಯತ್ನಗಳು ನಡೆಯುತ್ತಿದೆ.

    ಟರ್ಕಿ ದೇಶದ ರಾಜಧಾನಿಯಾದ ಇಸ್ತಾಂಬೂಲ್ ನಲ್ಲಿ ಇದೀಗ ಕೆಲವು ವ್ಯಕ್ತಿಗಳು ಭಾರತದ ಮಾನಹಾನಿಕಾರಕ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ನಿಮ್ಮ ಮಹಿಳೆಯರನ್ನು ಭಾರತಕ್ಕೆ ಕಳುಹಿಸುವ ಮೊದಲು ಮತ್ತೊಮ್ಮೆ ಯೋಚಿಸಿ.

    ಭಾರತ ಮಹಿಳೆಯರಿಗೆ ಸುರಕ್ಷಿತ ದೇಶವಲ್ಲ ಎನ್ನುವ ಬರಹಗಳನ್ನು ಟೀ ಶರ್ಟ್ ಗಳಲ್ಲಿ ಪ್ರದರ್ಶಿಸುವ ಮೂಲಕ ಈ ಕೃತ್ಯಗಳು ನಡೆಯುತ್ತಿದೆ.

    ಒಂದೆಡೆ ದೇಶದ ಕೆಲವು ಮಹಿಳಾ ಮಣಿಗಳು ಕಾಶ್ಮೀರದ ಕೃತ್ಯದ ಬಳಿಕ ತಮ್ಮನ್ನು ಭಾರತೀಯರೆನ್ನಲು ನಾಚಿಕೆಯಾಗುತ್ತಿದೆ ಎನ್ನುವ ಹೇಳಿಕೆ ನೀಡುತ್ತಿದ್ದರೆ, ಇನ್ನೊಂದಡೆ ವಿದೇಶದಲ್ಲೂ ಭಾರತದ ಮಾನ ಹರಾಜು ಹಾಕುವಂತಹ ಪ್ರಯತ್ನಗಳು ನಡೆಯುತ್ತಿದೆ.

    ತಮ್ಮ ರಾಜಕೀಯ ಬೇಯಿಸಿಕೊಳ್ಳುವ ಒಂದೇ ಉದ್ಧೇಶದಿಂದ ಆಸಿಫಾ ಪ್ರಕರಣವನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ತಮ್ಮ ಸ್ವಂತ ಸ್ವಾರ್ಥಕ್ಕಾಗಿ ದೇಶದ ಮಾನ ಹರಾಜು ಹಾಕುವಲ್ಲಿ ತಮ್ಮ ಕೊಡುಗೆಯನ್ನೂ ನೀಡುತ್ತಿವೆ.

    ಸಿರಿಯಾ ಸೇರಿದಂತೆ ಹಲವು ದೇಶಗಳಲ್ಲಿ ಮಕ್ಕಳ ಹಾಗೂ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮೌನವಾಗಿರುವ ಮಹಿಳಾ ಹಾಗೂ ಮಕ್ಕಳ ಪರ ಎನ್ನುವ ವಿಶ್ವದ ರಾಷ್ಟ್ರಗಳು ಇದೀಗ ಭಾರತದಲ್ಲಿ ನಡೆದ ಪ್ರಕರಣಕ್ಕೆ ಬಗೆ ಬಗೆಯ ಬಣ್ಣ ಬಳಿಯುವ ಮೂಲಕ ವಿಶ್ವದಾದ್ಯಂತ ಭಾರತಕ್ಕೆ ಕೆಟ್ಟ ಹೆಸರು ತರುವಂತಹ ಪ್ರಯತ್ನದಲ್ಲಿ ನಿರತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply