Connect with us

    LATEST NEWS

    ಕರಾವಳಿಯಲ್ಲಿ ಓಖಿ ಚಂಡಮಾರುತ ಪ್ರಭಾವ ಉಳ್ಳಾಲ ಸಮುದ್ರ ಪ್ರಕ್ಷುಬ್ದ

    ಕರಾವಳಿಯಲ್ಲಿ ಓಖಿ ಚಂಡಮಾರುತ ಪ್ರಭಾವ ಸಮುದ್ರ ಪ್ರಕ್ಷುಬ್ದ

    ಮಂಗಳೂರು ಡಿಸೆಂಬರ್ 03: ಓಖಿ ಚಂಡಮಾರುತ ಪ್ರಭಾವ ಮಂಗಳೂರಿನ ಕಡಲತೀರದಲ್ಲಿ ಕಂಡುಬರುತ್ತಿದೆ. ಮಂಗಳೂರು ಹೊರವಲಯದ ಉಳ್ಳಾಲದ ತೀರ ಪ್ರದೇಶದಲ್ಲಿ ಕಡಲಬ್ಬರ ಹೆಚ್ಚಿದ್ದು ಆಳೆತ್ತರದ ಕಲೆಗಳು ಏಳುತ್ತಿದೆ.

    ಉಳ್ಳಾಲದ ಸೋಮೇಶ್ವರ, ಉಚ್ಚಿಲ, ಸಂಕೊಲಿಗೆ ಎಂಬಲ್ಲಿ ಕಡಲು ಅಬ್ಬರಿಸುತ್ತಿದ್ದು ತೀರ ಪ್ರದೇಶದ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
    ಉಳ್ಳಾಲ ತೀರ ಪ್ರದೇಶದ 15 ಮನೆಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಪಣಂಬೂರು, ಮುಕ್ಕ, ಸಸಿಹಿತ್ಲು ಸಮುದ್ರ ತೀರದಲ್ಲೂ ಕಡಲು ಪ್ರಕ್ಷುಬ್ದಗೊಂಡಿದೆ.

    ರಾತ್ರಿ 9 ಗಂಟೆಯ ಬಳಿಕ ಹಠಾತ್ತಾಗಿ ಕಡಲು ಅಬ್ಬರಿಸುತ್ತಿರುವುದು ಕಂಡುಬಂದಿದ್ದು. ಸ್ಥಳಕ್ಕೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

    ವಿಡಿಯೋಗಾಗಿ…

    Share Information
    Advertisement
    Click to comment

    You must be logged in to post a comment Login

    Leave a Reply