ಊಟದಲ್ಲೂ ಸೆಲ್ಪಿಗಾಗಿ ಕಾಡಿದ ಕಿರಿಕ್ ಅಭಿಮಾನಿಗಳು: ಮಂಜುನಾಥನ ಸನ್ನಿಧಿಯಲ್ಲಿ ನಟ ನಿಕಿಲ್ ಕುಮಾರಸ್ವಾಮಿ

ಪುತ್ತೂರು, ಮಾರ್ಚ್ 04 : ಚಿತ್ರನಟ ಹಾಗೂ ಸಿಎಂ ಕುಮಾರ ಸ್ವಾಮೀ ಅವರ ಸುಪುತ್ರ ನಿಖಿಲ್ ಕುಮಾರಸ್ವಾಮಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ದೇವರ ದರ್ಶನ ಮಾಡಿ ವಿಶೇಷ ಪೂಜೆ ನಡೆಸಿ ಆಶೀರ್ವಾದ ಪಡೆದುಕೊಂಡರು.

ನಂತರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶಿರ್ವಾದ ಪಡೆದುಕೊಂಡರು. ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿವ ಹಿನ್ನೆಲೆಯಲ್ಲಿ ನಿಕಿಲ್ ಅವರ ಧರ್ಮಸ್ಥಳ ಭೇಟಿ ಮಹತ್ವ ಪಡೆದುಕೊಂಡಿದೆ. ಚುನಾವಣಾ ಕಣಕ್ಕಿಳಿಯುತ್ತಿರುವ ಗೌಡ್ರ ಕುಟುಂಬದ ಮೂರನೇ ಕುಡಿ ನಿಕಿಲ್ ಆಗಿದ್ದಾರೆ.ಈ ಬಗ್ಗೆ ಸುದ್ದಿಗಾರೊಂದಿಗೆ ಪ್ರತಿಕ್ರೀಯಿಸಿರುವ ನಿಕಿಲ್ ಮಂಡ್ಯದಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವುದು ಖಚಿತ. ಅಜ್ಜ ದೇವೇಗೌಡರು ಕೊಟ್ಟಿರುವ ಜವಾಬ್ದಾರಿ ಸಂಪೂರ್ಣವಾಗಿ ನಿರ್ವಹಿಸುತ್ತೇನೆ. ಅಧಿಕೃತವಾಗಿ ನನಗೆ ದೇವೇಗೌಡರು ಟಿಕೆಟ್ ಘೋಷಣೆ ಮಾಡಿದ್ದಾರೆ.ವರಿಷ್ಠರು ತೀರ್ಮಾನ ಮಾಡಿದ ಮೇಲೆ ನಾವು ಸ್ಪರ್ಧಿಸಲೇಕು. ಮಂಡ್ಯದ ಋಣವನ್ನು ತೀರಿಸಲು ಕೊನೆ ಉಸಿರು ಇರುವ ವರೆಗೂ ಪ್ರಯತ್ನ ಪಡುತ್ತೇನೆ ಎಂದ ನಿಕಲ್ ಅವರು ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ರೆಬೆಲ್ ಸ್ಟಾರ್ ಅಂಬರೀಷರ ಪತ್ನಿ ಸುಮಲತಾ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುಲು ಹೋಗುವುದಿಲ್ಲ ಎಂದು ಹೇಳಿದರು.
ಇನ್ನು ಚಿತ್ರ ನಟನಾಗಿರುವ ನಿಕಿಲ್ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ ಸಂದರ್ಭ ಅವರೊಂದಿಗೆ ಸೆಲ್ಪೀ ತೆಗೆಯಲು ಶ್ರಥ ಕ್ಷೇತ್ರಕ್ಕೆ ಬಂದ ಪ್ರವಾಸಿಗರು, ಅಭಿಮಾನಿಗಳು ಮುಗಿ ಬಿದ್ದರು. ಮುಖ್ಯಮಂತ್ರಿ ಕುಮಾರ ಸ್ವಾಮೀ ಅವರ ಮಗನಾದರೂ ಸಾಮಾನ್ಯರಂತೆ ಭಕ್ತರ ಮಧ್ಯೆ ಕುಳಿತು ಊಟ ಮಾಡಿ ಮಾದರಿಯಾದರು. ಆದರೆ ಊಟದ ವೇಳೆಯಲ್ಲೂ ಸೆಲ್ಪಿಗೆ ನಿಕಿಲ್‌ಗೆ ಕಿರಿಕಿರಿ ಮಾಡುತ್ತಿದ್ದ ಕಿರಿಕ್ ಅಭಿಮಾನಿಗಳು ಅಲ್ಲಿಯೂ ಅವರನ್ನು ಸೆಲ್ಪಿಗಾಗಿ ಕಾಡಿದರು.

Facebook Comments

comments