ಉಳ್ಳಾಲದಲ್ಲಿ ಯದ್ವತದ್ವ ಕಾರು ಓಡಿಸಿದ ಆಸಾಮಿ: ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ

ಮಂಗಳೂರು, ಫೆಬ್ಯರವರಿ 12: ಅಸಾಮಿಯೊಬ್ಬ ಯದ್ವಾತದ್ವಾ ಕಾರು ಓಡಿಸಿ ಸಾರ್ವಜನಿಕರ ನೆಮ್ಮದಿ ಕೆಡಿಸಿದ ಘಟನೆ ಮಂಗಳೂರು ನಗರದ ಉಳ್ಳಾಲದಲ್ಲಿ ಇಂದು ರಾತ್ರಿ ಸಂಭವಿಸಿದೆ.

ಉಳ್ಳಾಲ ತೊಕ್ಕೊಟ್ಟು‌ ಅಂಬಿಕಾರೋಡಿನಲ್ಲಿ ಈ ಘಟನೆ ನಡೆದಿದ್ದು, ಯದ್ವ -ತದ್ವಾ ಕಾರು ಚಾಲನೆಯಿಂದ ಸ್ಥಳಿಯರು ಭಯಭೀತರಾಗಿದ್ದರು. ಸ್ಥಳೀಯ ಯುವಕರು ಕಾರನ್ನು ಅಡ್ಡಗಟ್ಟಿ ಕಾರು ಓಡಿಸುತ್ತಿದ್ದ ಯುವಕನಿಗೆ ಸರಿಯಾಗೇ ಕ್ಲಾಸ್ ತಗೊಂಡಿದ್ದಾರೆ. ಕಾರು ಚಾಲಕನನ್ನು ಸಿರಾಜ್ ಎಂದು ಗುರುತ್ತಿಸಲಾಗಿದ್ದು, ಈತ ತಲಪಾಡಿ ಕೆ.ಸಿ.ರೋಡ್ ನಿವಾಸಿ ಎಂದು ತಿಳಿದು ಬಂದಿದೆ. ಘಟನೆಯಿಂದ ಸ್ಥಳದಲ್ಲಿ‌ ಎರಡೂ ಗುಂಪಿನ ಜನ ಜಮಾಯಿಸಿದ ಕಾರಣ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಉಳ್ಳಾಲ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದ್ದು, ಆರೋಪಿ ಸಿರಾಜನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.

Facebook Comments

comments