Connect with us

LATEST NEWS

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪಾತಕಿಗಳಿಗೆ ರಾಯಲ್ ಟ್ರೀಟ್ ಮೆಂಟ್ :ಮೂವರು ಪೋಲಿಸರ ಅಮಾನತು

ಉಡುಪಿ,ಆಗಸ್ಟ್ 22 : ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಗೆ ರಾಜಾತಿಥ್ಯ ನೀಡಿದ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ ನವನೀತ್ ಮತ್ತು ನಿರಂಜನ್ ಭಟ್ಟನನ್ನು ನಿನ್ನೆ ಪೊಲೀಸರು ಖಾಸಾಗಿ ಎಸಿ ಇನ್ನೋವಾ ಕಾರಿನಲ್ಲಿ ಉಡುಪಿ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದರು. ಸರಕಾರಿ ವಾಹನದಲ್ಲಿ ಕರೆದುಕೊಂಡು ಬರಬೇಕಾಗಿದ್ದ ಸಿಬ್ಬಂದಿಗಳು ಕಾನೂನನ್ನು ಗಾಳಿಗೆ ತೂರಿ ವಿಐಪಿ ಟ್ರೀಟ್ ಮೆಂಟ್ ನಲ್ಲಿ ಪೋಲಿಸರು ಕೊಲೆ ಆರೋಪಿಗಳನ್ನು ಕರೆದುಕೊಂಡು ಬಂದದ್ದು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಪಾಕ ಟೀಕೆಗೆ ಹಾಗೂ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ದಕ್ಷ ಅಧಿಕಾರಿಯಾದ ನೂತನ ಎಸ್ ಪಿ ಡಾ. ಸಂದೀಪ್ ಪಾಟಿಲ್ ಅವರು ಎಚ್ಚೆತ್ತು ತನಿಖೆಗೆ ಅದೇಶಿದ್ದರು. ಉಡುಪಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮಾಡಲು ಎಸ್ಪಿ ಸೂಚನೆ ನೀಡಿದ್ದರು. ಡಿವೈಎಸ್ಪಿ ಅವರ ಪ್ರಾಥಮಿಕ ತನಿಖೆಯಲ್ಲಿ ಮೂವರು ಪೋಲಿಸ್ ಸಿಬ್ಬಂದಿಗಳು ಮೇಲ್ನೋಟಕ್ಕೆ ತಪ್ಪೆಸಗಿದ್ದಾರೆ ಎಂದು ಸಾಬೀತಾಯಿತು. ಈ ಹಿನ್ನೆಲೆಯಲ್ಲಿ ಉಡುಪಿ ಎಸ್ಪಿ ಡಾ.ಸಂಜೀವ್ ಪಾಟೀಲ್ ಮೂರು ಸಿಬ್ಬಂದಿಗಳನ್ನು ಅಮಾನತಿನಲ್ಲಿ ಇಟ್ಟು ತನಿಖೆ ಮುಂದುವರೆಸಲು ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸುಧಾಕರ, ರೇಣುಕಾ, ಸಲ್ಮಾನ್ ಖಾನ್ ಎಂಬವರನ್ನು ಅಮಾನತು ಮಾಡಿದ್ದಾರೆ. ಈ ಹಿಂದೆ ಕೂಡ ಆರೋಪಿಗಳನ್ನು ಪೊಲೀಸರು ಜೀಪಿನಲ್ಲಿ ಮುಂಭಾಗದಲ್ಲಿ ಕೂರಿಸಿ ಕರೆದುಕೊಂಡು ಹೋಗಿದ್ದರು. ಖಾಸಗಿ ಬಸ್ಸಿನಲ್ಲಿ ಮಂಗಳೂರಿನಿಂದ ಆರೋಪಿಗಳನ್ನು ಕರೆದುಕೊಂಡು ಬಂದಿದ್ದರು. ಆರೋಪಿಗಳಿಗೆ ಐಷಾರಾಮಿ ಹೊಟೇಲ್ ಊಟ ಹಾಕಿಸಿದ್ದರು .ಪ್ರಸ್ತುತ ಇದೇ ಆರೋಪಿಗಳಿಗೆ ಪೊಲೀಸರು ಹವಾನಿಯಂತ್ರಿತ ಕಾರು ಕೂಡ ವ್ಯವಸ್ಥೆ ಮಾಡಿದ್ದಾರೆ. 2016 ರ ಜುಲೈ 28 ರಂದು ಉದಯಮಿ ಭಾಸ್ಕರ್ ಶೆಟ್ಟಿ ಕೊಲೆ ನಡೆದಿತ್ತು. ದಾಹ ಮೋಹಕ್ಕೆ ಒಳಗಾಗಿ ಸ್ವಂತ ಪತ್ನಿ ಹಾಗೂ ಪತ್ನಿ ಪ್ರಿಯಕರ ನಿರಂಜನ್ ಭಟ್ ಹಾಗೂ ಮಗ ನವನೀತ್ ಶೆಟ್ಟಿ ಸೇರಿ ಕೊಲೆ ಮಾಡಿ ಹೋಮಕುಂಡದಲ್ಲಿ ಸುಟ್ಟುಹಾಕಿದ ಆರೋಪ ಎದುರಿಸುತ್ತಿದ್ದಾರೆ. ಆದರೆ ಜೈಲಿನಲ್ಲಿದ್ದರೂ ಆರೋಪಿಗಳು ಆರಾಮವಾಗಿದ್ದಾರೆ. ಪೊಲೀಸ್ ಇಲಾಖೆ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ನೀಡುತ್ತಿದೆ ಶಶಿಕಲಾ ಪ್ರಕರಣದಂತೆ ಉಡುಪಿ ಪೊಲೀಸರು ಶ್ರೀಮಂತ ಖೈದಿಗಳಿಗೆ ರಾಜಾತಿಥ್ಯ ನೀಡುವುದು ಸರಿಯಲ್ಲ ಎನ್ನುವ ಅಸಮಾಧನ ಸಾರ್ವಾಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಒಟ್ಟಿನಲ್ಲಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಾದ ಪತ್ನಿ ರಾಜೇಶ್ವರಿ , ಪುತ್ರ ನವನೀತ್ ಶೆಟ್ಟಿ ಮತ್ತು ಅರ್ಚಕ ನಿರಂಜನ್ ಭಟ್ಟ ಮಂಗಳೂರು ಜೈಲಿನಲ್ಲಿ ರೋಯಲ್ ಟ್ರೀಟ್ ಮೆಂಟ್ ಇದೆ ಎನ್ನುವುದು ಮೇಲ್ನೊಟಕ್ಕೆ ಸಾಬೀತಾಗಿದೆ. ಕೋಲೆ ಆರೋಪಿಗಳಾರ ರಾಜೇಶ್ವರಿ ಹಾಗೂ ಪುತ್ರ ನವನೀತ್ ಶೆಟ್ಟಿ ಜೈಲಿನಲ್ಲೆ ಜಿಮ್ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ ಅನ್ನುವ ಮಾತುಗಳು ಕೇಳಿಬರುತ್ತಿದೆ. ನವನೀತನ ಕಟ್ಟಮಸ್ತಾದ ದೇಹ ನೋಡಿದರೆ ಆ ಮಾತು ನಿಜ ಅನ್ನಿಸುತ್ತದೆ. ಅದೇ ಏನೇ ಇದ್ದರೂ ನೂತನ ಪೋಲಿಸ್ ವರಿಷ್ಟಾಧಿಕಾರಿ ಸಂದೀಪ್ ಪಾಟೀಲ್ ಸಿಬ್ಬಂದಿಗಳ ಮೇಲೆ ಕೈಗೊಂಡಿರುವುದು ಶ್ಲಾಘನೀಯ ಎಂದರೂ ಇದರ ಹಿಂದಿನ ಕಿಂಗ್ ಪಿನ್ ಗಳನ್ನು ಪತ್ತೆ ಹಚ್ಚಿ ಶಿಕ್ಷಿಸಿ ಪೋಲಿಸ್ ಇಲಾಖೆಯ ಮಾನ ಉಳಿಸುವ ಗುರುತರ ಜವಾಬ್ದಾರಿ ಕೂಡ ಇವರ ಮೇಲಿದೆ.