Connect with us

UDUPI

ಉಡುಪಿಯಲ್ಲಿ ವೃದ್ದೆಯ ಸರಗಳ್ಳತನ

ಉಡುಪಿಯಲ್ಲಿ ವೃದ್ದೆಯ ಸರಗಳ್ಳತನ

ಉಡುಪಿ ನವೆಂಬರ್ 28: ಬೈಕಿನಲ್ಲಿ ಬಂದ ಇಬ್ಬರು ಖದೀಮರು ವೃದ್ದೆಯ ಸರಗಳ್ಳತನ ಮಾಡಿ ಪರಾರಿಯಾದ ಘಟನೆ ಉಡುಪಿಯ ಎರ್ಮಾಳಿನಲ್ಲಿ ನಡೆದಿದೆ.

ಎರ್ಮಾಳು ಸರಳ ಶೆಟ್ಟಿ (75) ಚಿನ್ನದ ಸರ ಕಳಕೊಂಡ ವೃದ್ದೆ. ಮುಂಜಾನೆ ಸರಳ ಶೆಟ್ಟಿ ಅವರು ಎರ್ಮಾಳು ಸೊಸೈಟಿ ಗೆ ಹಾಲು ಕೊಡಲು ಬರುತ್ತಿದ್ದರು. ಈ ಸಂದರ್ಭ ಬೈಕಿನಲ್ಲಿ ಬಂದ ಇಬ್ಬರು ದಾರಿಕೇಳುವ ನೆಪದಲ್ಲಿ ಸರಳ ಶೆಟ್ಟಿ ಅವರನ್ನು ನಿಲ್ಲಿಸಿ ಮಾತನಾಡಿದ್ದಾರೆ. ಕೂಡಲೆ ವೃದ್ದೆಯ ಕುತ್ತಿಗೆಯಲ್ಲಿ ಚಿನ್ನದ ಸರ ವನ್ನು ಎಳೆದು ಬೈಕಿನಲ್ಲಿ ಪರಾರಿಯಾಗಿದ್ದಾರೆ.

ಕಳ್ಳರು ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಕಳ್ಳರಿಗಾಗಿ ಪಡುಬಿದ್ರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Facebook Comments

comments