LATEST NEWS
ಅಯ್ಯಪ್ಪ ಮಾಲೆಧಾರಿಗಳ ಮೇಲೆ ಪೊಲೀಸರ ಲಾಠಿಚಾರ್ಜ್
ಅಯ್ಯಪ್ಪ ಮಾಲೆಧಾರಿಗಳ ಮೇಲೆ ಪೊಲೀಸರ ಲಾಠಿಚಾರ್ಜ್
ಮಂಗಳೂರು ಡಿಸೆಂಬರ್ 25: ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನಲ್ಲಿ ಗಂಜಿಮಠದಲ್ಲಿ ಅಯ್ಯಪ್ಪ ವೃತಧಾರಿಗೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದಿತ್ತು. ಈ ಹಿನ್ನಲೆಯಲ್ಲಿ ಬಸ್ ನ ಚಾಲಕ ಮತ್ತು ಅಯ್ಯಪ್ಪ ವೃತಧಾರಿಗೆ ಮಾತುಕತೆ ನಡೆದು ಬಸ್ ಚಾಲಕ ಅಯ್ಯಪ್ಪ ವೃತಧಾರಿಗೆ ನಿಂದನೆ ಮಾಡಿದ್ದಾನೆ.
ಈ ಹಿನ್ನಲೆಯಲ್ಲಿ ಅಯ್ಯಪ್ಪ ವೃತಧಾರಿಗಳು ಬಸ್ ಚಾಲಕ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಜ್ಪೆ ಪೊಲೀಸರು ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದ ಹಿನ್ನಲೆಯಲ್ಲಿ ಪೊಲೀಸರು ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಯ್ಯಪ್ಪ ವೃತಧಾರಿಗಳು ಸೇರಿದಂತೆ ಹತ್ತು ವರ್ಷದ ಮಗುವಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಜ್ಪೆ ಪೊಲೀಸರ ಲಾಠಿ ಚಾರ್ಜ್ ವಿರುದ್ದ ಅಯ್ಯಪ್ಪ ವೃತಧಾರಿಗಳು ಪ್ರತಿಭಟನೆ ನಡೆಸಿದ್ದಾರೆ.
You must be logged in to post a comment Login